ಆರೋಗ್ಯಸಂಪನ್ನ ಮತ್ತು ಸುರಕ್ಷಿತ ಭಾರತಕ್ಕಾಗಿ

ಶ್ರೀ ಮಹಾಧನ್ವಂತರಿ ಯಾಗ

ಆಯೋಜಕರು : ಸನಾತನ ಸಂಸ್ಥೆ

ಭಾನುವಾರ, 29 ನವೆಂಬರ್ 2026|ಮಧ್ಯಾಹ್ನ 3:00 ರಿಂದ ಸಂಜೆ 7:00 ರವರೆಗೆ
📍M.G.M ಮೈದಾನ, ಉಡುಪಿ-ಮಣಿಪಾಲ ರಸ್ತೆ, ಕುಂಜಿಬೆಟ್ಟು, ಉಡುಪಿ, ಕರ್ನಾಟಕ
ಪವಿತ್ರ ಯಾಗದ ಕ್ಷಣಗಣನೆ

ಶ್ರೀಕೃಷ್ಣ ನೆಲೆಸಿರುವ ಉಡುಪಿಯ ಪಾವನ ಕ್ಷೇತ್ರದಲ್ಲಿ ಸಾವಿರಾರು ಭಕ್ತರೊಂದಿಗೆ ನೀವೂ ಸೇರಿ !

00ದಿನ
:
00ಗಂಟೆ
:
00ನಿಮಿಷ
:
00ಸೆಕೆಂಡ್

ಶ್ರೀ ಮಹಾಧನ್ವಂತರಿ ಯಾಗದ ಕುರಿತು

🌸
Mahadhanvantari Deity

ಭಗವಾನ್ ಶ್ರೀಕೃಷ್ಣನ ನೆಲೆಯಾಗಿರುವ, ಜಗದ್ಗುರು ಮಧ್ವಾಚಾರ್ಯರ ತಪೋಭೂಮಿ ಎಂದೂ ಖ್ಯಾತವಾಗಿರುವ ಉಡುಪಿಯಲ್ಲಿ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆಯವರ ಸಂಕಲ್ಪದಂತೆ ಭವ್ಯ ಶ್ರೀ ಮಹಾಧನ್ವಂತರಿ ಯಾಗವನ್ನು ಆಯೋಜಿಸಲಾಗಿದೆ. ವೈದ್ಯರ ದೇವತೆ ಹಾಗೂ ಆರೋಗ್ಯವನ್ನು ಅನುಗ್ರಹಿಸುವ ಭಗವಾನ್ ಧನ್ವಂತರಿಯನ್ನು ಈ ಯಾಗದ ಮೂಲಕ ಆಹ್ವಾನಿಸಿ, ಭಾರತವನ್ನು ರಕ್ಷಿಸಲು, ಭಕ್ತರ ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ದೂರ ಮಾಡಲು ಮತ್ತು ಮನುಕುಲಕ್ಕೆ ಯೋಗಕ್ಷೇಮವನ್ನು ಕರುಣಿಸಲು ಪ್ರಾರ್ಥಿಸಲಾಗುವುದು.

ಮಹಾಯಾಗದ ಉದ್ದೇಶಗಳು

ಭಾರತದ ರಕ್ಷಣೆ

ಜಾಗತಿಕ ಸಂಘರ್ಷ ಮತ್ತು ಅಸ್ಥಿರತೆಯ ಈ ಸಮಯದಲ್ಲಿ ಒಂದು ಸುರಕ್ಷಾ ಕವಚ ನಿರ್ಮಾಣವಾಗಲು.

ಆಧ್ಯಾತ್ಮಿಕ ಲಾಭ

ಮಾನಸಿಕ ಒತ್ತಡ ಹಾಗೂ ನಕಾರಾತ್ಮಕ ಶಕ್ತಿಗಳಿಂದ ಉಂಟಾಗುವ ತೊಂದರೆಗಳ ನಿವಾರಣೆಯಾಗಲು.

ಆರೋಗ್ಯಕ್ಕಾಗಿ

ಪಿತೃದೋಷ / ಗ್ರಹದೋಷಗಳಿಂದ ಉಂಟಾಗುವ ಆರೋಗ್ಯ ಸಂಬಂಧಿತ ಸಮಸ್ಯೆಗಳ ನಿವಾರಣೆಯಾಗಲು.

ಸರ್ವತೋಮುಖ ಅಭಿವೃದ್ಧಿ

ರಾಷ್ಟ್ರದ ಬೆಳವಣಿಗೆ, ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆಗಳನ್ನು ಸಲ್ಲಿಸಲು.

ಯಾಗದಲ್ಲಿ ಭಾಗವಹಿಸುವವರಿಗೆ ಒಂದು ವಿಶೇಷ ಅವಕಾಶ

ಸೋಮನಾಥ ಜ್ಯೋತಿರ್ಲಿಂಗದ
ದರ್ಶನ

🌸
Somnath Jyotirlinga Sacred Darshan

ಚಂದ್ರದೇವರಿಂದ ಸ್ಥಾಪಿಸಲ್ಪಟ್ಟ ಮತ್ತು 1000 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂರಕ್ಷಿಸಲ್ಪಟ್ಟ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅಂಶಗಳ ದರ್ಶನವನ್ನು ಪಡೆಯುವ ಅಪರೂಪದ ಅವಕಾಶ ಭಕ್ತರಿಗೆ ಲಭಿಸಲಿದೆ.

ಯಾಗದ ಪ್ರೇರಣಾಸ್ರೋತ
Sachchidananda Parabrahman Dr. Jayant Balaji Athavale

ಸಚ್ಚಿದಾನಂದ ಪರಬ್ರಹ್ಮ

ಡಾ. ಜಯಂತ ಬಾಳಾಜಿ ಆಠವಲೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಸಂಮೋಹನೋಪಚಾರ ತಜ್ಞರಾಗಿದ್ದ ಅವರು, ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮದ ಪ್ರಸಾರ ಮಾಡಲು 1999 ರಲ್ಲಿ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ವ್ಯಾಪಕವಾದ ಆಧ್ಯಾತ್ಮಿಕ ಸಂಶೋಧನೆಗಳನ್ನು ನಡೆಸಿ, ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮವನ್ನು ಒಂದು ಶಾಸ್ತ್ರವೆಂದು ಸ್ಥಾಪಿಸಲು ಹಲವಾರು ಗ್ರಂಥಗಳನ್ನು ಸಂಕಲಿಸಿದ್ದಾರೆ. ಅವರ ಸಂಕಲ್ಪದಿಂದ ಸನಾತನ ಸಂಸ್ಥೆಯು ರಾಮರಾಜ್ಯದ ಸ್ಥಾಪನೆ ಮತ್ತು ಸಮಾಜ ಕಲ್ಯಾಣಕ್ಕಾಗಿ 300 ಕ್ಕೂ ಹೆಚ್ಚು ಯಾಗಗಳನ್ನು ಮತ್ತು 1,000 ಕ್ಕೂ ಹೆಚ್ಚು ಧಾರ್ಮಿಕ ವಿಧಿಗಳನ್ನು ನಡೆಸಿದೆ.

ವಂದನೀಯ ಉಪಸ್ಥಿತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು

🌸
ಶ್ರೀಸತ್ ಶಕ್ತಿ (ಶ್ರೀಮತಿ) ಬಿಂದಾ ಸಿಂಗಬಾಳ
ಆಧ್ಯಾತ್ಮಿಕ ಉತ್ತರಾಧಿಕಾರಿ

ಶ್ರೀಸತ್ ಶಕ್ತಿ (ಶ್ರೀಮತಿ) ಬಿಂದಾ ಸಿಂಗಬಾಳ

ಶ್ರೀಚಿತ್ ಶಕ್ತಿ (ಶ್ರೀಮತಿ) ಅಂಜಲಿ ಗಾಡಗೀಳ
ಆಧ್ಯಾತ್ಮಿಕ ಉತ್ತರಾಧಿಕಾರಿ

ಶ್ರೀಚಿತ್ ಶಕ್ತಿ (ಶ್ರೀಮತಿ) ಅಂಜಲಿ ಗಾಡಗೀಳ

Udupi - The Sacred Land of Bhagwan Shrikrishna

ಯಾಗದಲ್ಲಿ ಭಾಗವಹಿಸುವ ಮಹತ್ವ !

🌸

ಐತಿಹಾಸಿಕ ಕ್ಷಣದ ಭಾಗವಾಗಿರಿ

10,000 ಕ್ಕೂ ಹೆಚ್ಚು ಭಕ್ತರೊಂದಿಗೆ ಸೇರಿ ಅಪರೂಪದ ಯಾಗದಲ್ಲಿ ಭಾಗವಹಿಸಿ.

ರಾಷ್ಟ್ರ ಮತ್ತು ಧರ್ಮದ ಅಮೂಲ್ಯ ಸೇವೆ

ಯಾಗದಲ್ಲಿ ಭಾಗವಹಿಸುವುದು ಭಾರತದ ಸುರಕ್ಷೆ ಮತ್ತು ಸಾಮೂಹಿಕ ಧರ್ಮಜಾಗೃತಿಗಾಗಿ ಅಕ್ಷಯವಾದ ಆಧ್ಯಾತ್ಮಿಕ ಸೇವೆಯಾಗಿದೆ.

Devotee Assembly at MahaDhanvantari Yaga
10,000+ Devotees Gathering

ಆಧ್ಯಾತ್ಮಿಕ ಚೈತನ್ಯ ಪಡೆಯಿರಿ

ಚೈತನ್ಯಭರಿತ ವಾತಾವರಣದಲ್ಲಿ ಮಿಂದು, ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳಿ

ಸಾಮೂಹಿಕ ಆಧ್ಯಾತ್ಮಿಕ ಶಕ್ತಿ

ಯಾಗದ ಮಂತ್ರೋಚ್ಚಾರಣೆಯು ಪ್ರಬಲ ಸಾತ್ವಿಕ ಕಂಪನಗಳನ್ನು ಸೃಷ್ಟಿಸುತ್ತದೆ, ಇದು ವೈಯಕ್ತಿಕವಾಗಿ ಮತ್ತು ಸಮಾಜಕ್ಕೂ ಪಸರಿಸುತ್ತದೆ.

ಸ್ಥಳ

🌸

M.G.M. Ground, Kunjibettu

Udupi-Manipal Main Road, Udupi, Karnataka – 576 102
8QX6+4H7
M.G.M. GroundMahayaga MandapKadiyali TempleOpen in Google Maps
Landmark: Opposite MGM College & Indrali Bridge

How to Reach the Venue

🚆
By Railway:Udupi Railway Station (UD) is just 4.2 km away. Auto-rickshaws and city buses operate frequently to Kunjibettu.
🚌
By Bus:Udupi KSRTC & Service Bus Stand is 2.5 km away. Board any bus heading towards Manipal and alight at MGM College stop.
✈️
By Air:Mangaluru International Airport (IXE) is 55 km away (approx 1 hr 15 min drive via NH 66).
Devotee Helpline & Assistance

ಹಿಂದಿನ ಕಾರ್ಯಕ್ರಮಗಳು

🌸
300+ಯಾಗಗಳು
1,000+ಧಾರ್ಮಿಕ ವಿಧಿಗಳು
50,000+ಭಕ್ತರು
ಶ್ರೀ ರಾಜಮಾತಂಗಿ ಮಹಾಯಜ್ಞ 2026
👥 7,000+ Devotees

ಶ್ರೀ ರಾಜಮಾತಂಗಿ ಮಹಾಯಜ್ಞ 2026

📍 Mumbai, Maharashtra

ಭಾರತಕ್ಕೆ ಆಧ್ಯಾತ್ಮಿಕ ರಕ್ಷಾಕವಚ ಲಭಿಸಲು, ಸರ್ವತೋಮುಖ ಏಳ್ಗೆ, ಮತ್ತು ರಾಮರಾಜ್ಯದ ಸ್ಥಾಪನೆಯ ಪವಿತ್ರ ಸಂಕಲ್ಪದೊಂದಿಗೆ ಸನಾತನ ಸಂಸ್ಥೆಯು ಮುಂಬೈನಲ್ಲಿ ಶ್ರೀ ರಾಜಮಾತಂಗಿ ಮಹಾಯಜ್ಞವನ್ನು ಆಯೋಜಿಸಿತ್ತು.

ದೆಹಲಿ ಶಂಖನಾದ ಮಹೋತ್ಸವ 2026
👥 3,000+ Devotees

ದೆಹಲಿ ಶಂಖನಾದ ಮಹೋತ್ಸವ 2026

📍 New Delhi

ನವದೆಹಲಿಯ 'ಭಾರತ ಮಂಡಪಂ'ದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಸಂತರು, ಕೇಂದ್ರ ಸಚಿವರು ಮತ್ತು 800 ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳನ್ನು ಒಗ್ಗೂಡಿಸಿ, ಶೌರ್ಯ, ಶ್ರದ್ಧೆ ಮತ್ತು ದೇಶಪ್ರೇಮದೊಂದಿಗೆ ಭಾರತದ ಸಾಂಸ್ಕೃತಿಕ ನವಜಾಗೃತಿಯ ನಾಂದಿಯಾಗಿತ್ತು.

ಗೋವಾ ಶಂಖನಾದ ಮಹೋತ್ಸವ 2025
👥 30,000+ Devotees

ಗೋವಾ ಶಂಖನಾದ ಮಹೋತ್ಸವ 2025

📍 Ponda, Goa

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆ ಅವರ 83 ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಈ ಮಹೋತ್ಸವದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶ್ವಕಲ್ಯಾಣಕ್ಕಾಗಿ ಭವ್ಯವಾದ ಮಹಾಧನ್ವಂತರಿ ಯಾಗವನ್ನೂ ಆಯೋಜಿಸಲಾಗಿತ್ತು.

Get Updates

Donate Register